|| Sri Kodhanda Ramo Vijayathe ||

Sri Sri 1008 Sri Raghuveera Teertha Karakamala Sanjatha

Sri Sri 108 Sri Narayana Teertha Padangalavaru

ರಂಗಾ ನಿನ್ನ ಕೊಂಡಾಡುವ  ಮಂಗಳಾತ್ಮರಸಂಗ ಸುಖವಿತ್ತು ಕಾಯೋ ಕರುಣಾಸಾಗರ
ಅರಿಯರೋ ನಿನ್ನಲ್ಲದೆ ಮತ್ತನ್ಯದೈವರಮರೆಯರೋ ನೀ ಮಾಡಿದ ಅನಿಮಿತ್ತೋಪಕಾರತೊರೆಯರೋ ನಿನಂಘ್ರಿಸೇವೆ ಪ್ರತಿವಾಸರಅರಿಯರೋ ಪರತತ್ವವಲ್ಲದೆ ಇತರ ವಿಚಾರ
ಜಯಾಜಯ ಲಾಭಾಲಾಭ ಮಾನಾಪಮಾನಭಯಾಭಯ ಸುಖದುಃಖ ಲೋಷ್ಟ ಕಾಂಚನಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನಶ್ರೀಯರಸ ಚಿಂತಿಸುವರೋ ನಿನ್ನ ಅಧೀನ
ಕಂಡ ಕಂಡಲ್ಲಿ ವಿಶ್ವರೂಪಕಾಂಭರೂಉಂಡು ಉಣಿಸಿದ್ದೆಲ್ಲಾ ನಿನ್ನ ಯಜ್ಞವೆಂಬರೂಬಂಡುಣಿಯಂದದಿ ನಾಮಾಮೃತವ ಸವಿವರೂಹೆಂಡರು ಮಕ್ಕಳು ನಿನ್ನ ತೊಂಡರೆಂಬರೋ
ನಗುವರೋ ರೋದಿಸುವರೋ ನಾಟ್ಯವಾಡುವರೋಬಗೆಯರೊ ಬಡತನ ಭಾಗ್ಯ ಭಾಗವತರುತೆಗೆಯರೊ ನಿನ್ನಲ್ಲಿ ಮನವನೊಮ್ಮೆಯಾದರೂಜಗನ್ನಾಥವಿಠಲ ನಿನ್ನವರೇನು ಧನ್ಯರೋ
ಸ್ಮರಿಸು ಗುರುಗಳನೆ ಮನವೇ ।ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ । ಬಂದ ।ದುರಿತ ಪರ್ವತಕೆ ಪವಿ ಎಂದು ತಿಳಿದೂ ।। ಪಲ್ಲವಿ ।।
ಉರಗ ವೃಶ್ಚಿಕ ವ್ಯಾಘ್ರ ಅರಸು ಚೋರಾಗ್ನಿ ಕರಿ ।ಗರಳ ಜ್ವರ ಮೊದಲಾದ ಭಯಗಳಿಂದಾ ।ಪೊರದು ಮಂಗಳವೀವ ನರಹರಿಯ ದಾಸರ ।ಚರಣ ಕಂಡೆನು ದುರಿತ ಪರಿಹಾರವಾಯಿತು ।। ಚರಣ ।।
ಗುರು ಸ್ಮರಣೆಯಿಂದ ಸಕಲ ವಿಪತ್ತು ಪರಿಹಾರ ।ಗುರು ಸ್ಮರಣೆಯಿಂದ ಪಂಪದವು ನಿನಗೆ ।ಗುರು ಸ್ಮರಣೆಯಿಂದ ಪುಷ್ಕಳ ದ್ರವ್ಯವದಗುವದು ।ಗುರು ಸ್ಮರಣೆಯಿಂದಾ ಹರಿ ವಲಿದು ಪೊರೆವಾ ।। ಚರಣ ।।
ಗುರುಗಳಿಗಿಂತಧಿಕ ಇನ್ನಾರು ಆಪ್ತರು ನಿನಗೆ ।ಗುರುಗಳೇ ಪರಮ ಹಿತಕರರು ನಿನಗೆ ।ಗುರು ಸ್ವಾಮಿ ವರದ ಗೋಪಾಲ ವಿಠಲ ಸರ್ವ ।ದುರಿತಗಳ ಕಳೆದು ಸುಖಕರದ ನೋಡೋ ।। ಚರಣ ।। 

Gallery

Annual Events

Site managed by Family members of Srigalu